Monday, 15 June 2020

ಕೊರೋನಾ ಹಾಡು (ದೂರದಿಂದ ಬಂದಂಥ ಸುಂದರಾಂಗ ಜಾಣ ಧಾಟಿ)

ಚೀನದಿಂದ ಬಂದಂಥ ನಾವೆಲು ಕೊರೋನಾ

ಸೀನಿನಲ್ಲೆ ಸೂರೆಗೊಂಡೆ ಸಾವಿರಾರು ಪ್ರಾಣ

ಚೀನದಿಂದ ಬಂದಂಥ ನಾವೆಲು ಕೊರೋನಾ

ಸೀನಿನಲ್ಲೆ ಸೂರೆಗೊಂಡ ಸಾವಿರಾರು ಪ್ರಾಣ

ಈತನಂತ್ಯವಿನ್ನು ಹೇಗೋ ರೀತಿ ನೀತಿ ಹೇಗೋ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

 

ದೇಶ ಸುತ್ತಿ ಬಂದಾಗ ಕ್ವಾರಂಟೈನಲಿ

ಹೋಗಿ ಸೇರಲಿ ಯಾರೆ ಆಗಲಿ

ದೇಶ ಸುತ್ತಿ ಬಂದಾಗ ಕ್ವಾರಂಟೈನಲಿ

ಹೋಗಿ ಸೇರಲಿ ಯಾರೆ ಆಗಲಿ

ಸೀನು ಕೆಮ್ಮು ಬಂದಾಗ ಮಾಸ್ಕು ಹಾಕಿಕೊ

ಸೋಪು ಹಾಕಿಕೊ ಕೈಯ ತೊಳೆದುಕೋ

ಫ್ರೆಂಡು ಗಿಂಡು ಕಂಡಾಗ ಹತ್ರ ಹೋಗಬೇಡ

ಮುಂದೆ ನಿಂತು ಕೈ ಕೈ ಷೇಕು ಮಾಡಬೇಡ

ಇಂದು ಕೂಡಿ ಬಂದ ವೇಳೆ  ಹೇಗೊ ಏನೊ ನಾಳೆ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ವೇಗಗಾರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

 

ಆಚೆ ಬಂದು ಶೋಕಾಗಿ ನಿಲ್ಲಬಾರದು

ಓಡಬಾರದು ನಡೆಯಬಾರದು

ದೂರವಿದ್ರೆ ಮೇಲೆಂದು ಅಂದುಕೊಂಡರೆ

ಹೊಂದಿಕೊಂಡರೆ ಇಲ್ಲ ತೊಂದರೆ

ಧೀರ ಶೂರ ನೀನೆಂದು ಜಂಭ ಮಾಡಬೇಡ

ಸೋಂಕು ತಗುಲದೆಂದು ನಂಬಿ ಹುಂಬನಾಗಬೇಡ

ಒಮ್ಮೆ ಬಂದು ದೇಹವೆಲ್ಲ

ಹಿಂಡಿ ಹೋದ ಮೇಲೆ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ವೇಗಗಾರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

No comments:

Post a Comment